Fixed Deposit is available with various tenures which the members can choose as ...
Saving accounts are intended to encourage saving habits among citizens...
ಸಂಘವು ಸದಸ್ಯರ ಪ್ರೀತಿ-ವಿಶ್ವಾಸಗಳಿಂದ ಅಧಿಕಾರಿಗಳ ಉತ್ತಮ ಸಲಹೆ-ಸೂಚನೆಗಳಿಂದ ಇಲ್ಲಿಯವರೆಗೆ ಉತ್ತಮ ಅಭಿವೃದ್ದಿ ಹೊಂದುತ್ತಾ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಇದು ಸರ್ವರಿಗೂ ಹೆಮ್ಮೆಯ ವಿಷಯ.
ಸಂಘವು ದಿನಾಂಕ:-೩೦-೦೧-೧೯೯೩ರAದು ನೊಂದಣಿಯಾಗಿದ್ದು, ಸದಸ್ಯರ ಏಳಿಗೆಗಾಗಿ ಕೆಲಸ ಮಾಡುತ್ತಾ ಸಂಘದ ಸದಸ್ಯರುಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಮತ್ತು ಸಂಘದ ಏಳಿಗೆಗಾಗಿ ಸಹಕರಿಸಿದ ತಮ್ಮೆಲ್ಲರಿಗೂ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಮತ್ತು ಸಂಘದ ಕಾರ್ಯ-ಕಲಾಪಗಳನ್ನು ನಡೆಸಿಕೊಂಡು ಹೋಗಲು ಮೇಲಿಂದ ಮೇಲೆ ಸಂಘಕ್ಕೆ ಭೇಟಿ ಕೊಟ್ಟು ಸಂಘದ ಏಳಿಗೆಗಾಗಿ ಸಲಹೆ-ಸೂಚನೆಗಳನ್ನು ನೀಡಿದ ಸಹಕಾರಿ ಇಲಾಖೆಯ ಅಧಿಕಾರಿಗಳಾದ ಶ್ರೀಮಾನ್ ಉಪನಿಬಂಧಕರು, ಕೊಪ್ಪಳ ಹಾಗೂ ಸಹಕಾರಿ ಅಭಿವೃದ್ಧಿ ಅಧಿಕಾರಗಳು, ಗಂಗಾವತಿ, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘ ತಾಲೂಕ ಘಟಕದ ಪದಾಧಿಕಾರಿಗಳು, ಕ.ಸ.ನೌ. ಸಂಘದ ತಾಲೂಕು ಘಟಕದ ಪದಾಧಿಕಾರಿಗಳು, ಹಾಗೂ ಲೆಕ್ಕಪರಿಶೋಧಕರು, ಗಂಗಾವತಿ ಇವರಿಗೆ ಕಾರ್ಯಕಾರಿ ಮಂಡಳಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರಿಗೂ ಹಾಗೂ ಸಮನ್ವಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಂಘವು ಯಾವಾಗಲೂ ಚಿರಋಣಿಯಾಗಿರುತ್ತದೆ. ಕೊನೆಯದಾಗಿ ಸಂಘವು ಉತ್ತರೊತ್ತವಾಗಿ ಅಭಿವೃದ್ಧಿ ಹೊಂದಲು ಸಹಾಯ-ಸಹಕಾರ ನೀಡಿದ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಗುರುಭವನ ಸಮಿತಿ ಪದಾಧಿಕಾರಿಗಳಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮಹನೀಯರೆಲ್ಲರಿಗೂ ಕಾರ್ಯಕಾರಿ ಮಂಡಳಿ ಪರವಾಗಿ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
“ಸಂಘ ಶಕ್ತ ಚಿರಯುವಾಗಲಿ, ಜೈಹಿಂದ, ಜೈಕರ್ನಾಟಕ’’
ತಮ್ಮ ವಿಶ್ವಾಸಿ
ಬಸವರಾಜ ರ್ಯಾವಳದ
ಅಧ್ಯಕ್ಷರು.
ಕ್ರ.ಸಂ | ಹೆಸರು | ಹುದ್ದೆ |
---|---|---|
1. | ಶ್ರೀ ಶಂಭುಲಿಂಗ ಕಪ್ಪಲಿ | ಕಾರ್ಯದರ್ಶಿ |
2. | ಶ್ರೀ ವೀರಣ್ಣ ಯಾದಗಿರಿ | ಪರಿಚಾರಕ |
MAXIMUM | RATE OF INTREST |
---|---|
5,00,000.00 | 1% |
MAXIMUM | RATE OF INTREST |
---|---|
10,000.00 | 2% |
© GTPSTA, Gangavati 2024-25
Designed & Developed By E Technology, Dharwad